ಉಡುಪಿ ಜಿಲ್ಲೆಯಲ್ಲಿ ಮಹತ್ವದ ಅಭಿವೃದ್ಧಿ: ಹೊಸ ರಸ್ತೆ ಯೋಜನೆ ಅಂಗೀಕರಿಸಲಾಗಿದೆ
ಮಂಗಳೂರು ಮಾರುಕಟ್ಟೆಯಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಳ
ವಿಧಾನ ಸಭೆ ಪ್ರಶ್ನೋತ್ತರ: ಶಾಸಕ ಸುನಿಲ್ ಕುಮಾರ್ ಪ್ರಶ್ನೆಗೆ ಚುರುಕು ಪ್ರತಿಕ್ರಿಯೆ
ಸ್ಥಳೀಯ ಕೃಷಿ ಮೇಳದಲ್ಲಿ ರೈತರು ಭಾಗವಹಿಸಿದ್ದಾರೆ
ಉಡುಪಿ — ಹೊಸ ಆಸ್ಪತ್ರೆ ಯೋಜನೆ ಘೋಷಣೆ
ಮುಖ್ಯ ಸುದ್ದಿ: ಉಡುಪಿ ರಸ್ತೆ ಯೋಜನೆ ಅಂಗೀಕೃತ
ಉಡುಪಿ ಜಿಲ್ಲೆಯಲ್ಲಿ ಹೊಸ ರಸ್ತೆ ನಿರ್ಮಾಣ ಯೋಜನೆ ಶೀಘ್ರ ಆರಂಭವಾಗಲಿದೆ. ಸ್ಥಳೀಯರು ಹಾಗೂ ಅಧಿಕಾರಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ಸುದ್ದಿ
ಬಿಗ್ ಬಾಸ್ ಕನ್ನಡ ಸೀಸನ್ 12 ರ ರನ್ನರ್ ಅಪ್ ಕರಾವಳಿಯ ಹೆಮ್ಮೆಯ ಪುತ್ರಿ ರಕ್ಷಿತಾ ಶೆಟ್ಟಿಯವರನ್ನು ಸನ್ಮಾನಿಸಿ ಅಭಿನಂದಿಸಿದ ಸಲ್ಲಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಬಿಗ್ ಬಾಸ್ ಕನ್ನಡ ಸೀಸನ್ 12 ರ ರನ್ನರ್ ಅಪ್ ಆಗಿರುವ ಕರಾವಳಿಯ ಹೆಮ್ಮೆಯ ಪುತ್ರಿ ರಕ್ಷಿತಾ ಶೆಟ್ಟಿ ಅವರನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ತಮ್ಮ ಸ್ವಗೃಹದಲ್ಲಿ ಇಂದು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಅಂಚಿಗೆ ಓದಿ →
ಬೈಕ್ ಕದ್ದ ಕದಿಮರನ್ನು ಮರಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು,ಪ್ರಕರಣ ದಾಖಲು
ಬೆಳ್ತಂಗಡಿ : ಬೈಕ್ ಕಳ್ಳತನಕ್ಕೆ ಯತ್ನದ ಆರೋಪದ ಹಿನ್ನೆಲೆ ಇಬ್ಬರನ್ನು ಮರಕ್ಕೆ ಕಟ್ಟಿ ಹಲ್ಲೆ ಸಾರ್ವಜನಿಕರು ಹಲ್ಲೆನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯಲ್ಲಿ ನಡೆದಿದೆ.
ಅಂಚಿಗೆ ಓದಿ →
ರಾಜ್ಯಪಾಲರ ಮೇಲಿನ ದೌರ್ಜನ್ಯ ‘ಪ್ರಜಾಪ್ರಭುತ್ವದ ಕಗ್ಗೊಲೆ’; ಸದನವನ್ನು ಬೀದಿ ರಂಪಾಟದ ಅಖಾಡ ಮಾಡಿದ ಕಾಂಗ್ರೆಸ್: ಶಾಸಕ ಕಿಶೋರ್ ಕುಮಾರ್ ಕಿಡಿ
ಬೆಂಗಳೂರು: “ರಾಜ್ಯದ ಪ್ರಥಮ ಪ್ರಜೆ, ಗೌರವಾನ್ವಿತ ರಾಜ್ಯಪಾಲರಿಗೆ ಸದನದಲ್ಲಿ ಅಡ್ಡಿಪಡಿಸಿ, ಅವರ ದಾರಿಯನ್ನು ಅಡ್ಡಗಟ್ಟಿ ದೈಹಿಕವಾಗಿ ಹಲ್ಲೆಗೆ ಯತ್ನಿಸಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ನಡೆ ಅತ್ಯಂತ ಹೇಯ ಮತ್ತು ಖಂಡನೀಯ.
ಧರ್ಮಸ್ಥಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ಬಾಸ್ ಕನ್ನಡ ಸ್ಪರ್ಧಿ ಉಗ್ರಂ ಮಂಜು
ಧರ್ಮಸ್ಥಳ:- ಕನ್ನಡದ ಜನಪ್ರಿಯ ಪೋಷಕ ನಟ, ಮಾಜಿ ಬಿಗ್ಬಾಸ್ ಕನ್ನಡ ಸ್ಪರ್ಧಿ ಆಗಿರುವ ಉಗ್ರಂ ಮಂಜು ವೈವಾಹಿಕ ಜೀವನಕ್ಕೆ (ಜ.23) ಕಾಲಿಟ್ಟಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಗುರು, ಹಿರಿಯ ಆಶೀರ್ವಾದದೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಬಿಗ್ ರಿಲೀಫ್..!! ನಿನ್ನೆ ಪುತ್ತೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಇಂದು ಹೈಕೋರ್ಟ್ ಮಹತ್ವದ ಆದೇಶ
ಪುತ್ತೂರು / ಬೆಂಗಳೂರು : ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಆರ್.ಎಸ್. ಎಸ್. ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ದಾಖಲಾಗಿದ್ದ, ಪ್ರಕರಣದ ಕುರಿತು ಹೈ ಕೋರ್ಟ್ ಮಹತ್ವದ ಆದೇಶ ಮಾಡಿದೆ.
ಕರಾವಳಿ ಜನತೆಗೆ ರೈಲ್ವೆ ಇಲಾಖೆಯಿಂದ ಭರ್ಜರಿ ಕೊಡುಗೆ: ನಾಗರ್‌ಕೋವಿಲ್ - ಮಂಗಳೂರು 'ಅಮೃತ್ ಭಾರತ್' ರೈಲು ನಾಳೆ ಲೋಕಾರ್ಪಣೆ
ಮಂಗಳೂರು: ಭಾರತೀಯ ರೈಲ್ವೆಯು ಕರಾವಳಿ ಕರ್ನಾಟಕ ಮತ್ತು ದಕ್ಷಿಣ ತಮಿಳುನಾಡು ನಡುವಿನ ಸಂಪರ್ಕವನ್ನು ವೃದ್ಧಿಸಲು ಹೊಸ 'ಅಮೃತ್ ಭಾರತ್' ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸುತ್ತಿದ್ದು, ನಾಳೆ ಜನವರಿ 23 ರಂದು ಈ ರೈಲು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ತಿರುವನಂತಪುರಂನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ನೂತನ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಸ್ವಚ್ಛತಾ ಶ್ರಮದಾನ ಹಾಗೂ ಮಾಸಿಕ ಸಭೆ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಸ್ವಚ್ಛತಾ ಶ್ರಮದಾನ ಹಾಗೂ ಮಾಸಿಕ ಸಭೆ ಜನವರಿ 18 ರವಿವಾರ ಜರಗಿತು.
ಪುತ್ತೂರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ : ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಜೈಲು ಶಿಕ್ಷೆ
ಪುತ್ತೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿತುಕುಳ ನೀಡಿದ ಆರೋಪ ಎದುರಿಸುತ್ತಿರುವ ಪುತ್ತೂರು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಉಡುಪಿಯ ಭವ್ಯ ಪರಂಪರೆಗೆ ಕಾಂಗ್ರೆಸ್ ಅಪಮಾನ: ಪರ್ಯಾಯೋತ್ಸವದಲ್ಲಿ ರಾಜಕೀಯ ಬೆರೆಸುವ ಕುತಂತ್ರಕ್ಕೆ ಆಕ್ರೋಶ
ಉಡುಪಿ: ನೂರಾರು ವರ್ಷಗಳ ಇತಿಹಾಸವಿರುವ, ವಿಶ್ವವಿಖ್ಯಾತ ಉಡುಪಿ ಪರ್ಯಾಯ ಮಹೋತ್ಸವದ ಪವಿತ್ರ ಕ್ಷಣಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷದ ನಡೆ ಇದೀಗ ಕರಾವಳಿ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬಂಟ್ವಾಳ : ಆನ್ ಲೈನ್ ಆ್ಯಪ್ ನಲ್ಲಿ ಚೂಡಿದಾರ್ ಬುಕ್ ಮಾಡಿ 87 ಸಾವಿರ ಕಳೆದುಕೊಂಡ ಯುವತಿ.
ಬಂಟ್ವಾಳ : ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬಂದ ಜಾಹಿರಾತು ನಂಬಿ ಆನ್ಲೈನ್ ಆ್ಯಪ್ ಮೂಲಕ ಚೂಡಿದಾರ್ ಬುತ್ ಮಾಡಿದ ಮಹಿಳೆ ಸೈಬರ್ ವಂಚಕರಿಂದ 87 ಸಾವಿರ ಕಳೆದುಕೊಂಡ ಘಟನೆ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪುತ್ತೂರು: ಪುತ್ತೂರು ಉಪ ವಿಭಾಗದ ಉಪ ಪೊಲೀಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕಾರಿಸಿದ ಪ್ರಮೋದ್ ಕುಮಾರ್
ಪುತ್ತೂರು: ಪುತ್ತೂರು ಉಪ ವಿಭಾಗದ ಉಪ ಪೊಲೀಸ್ ಅಧಿಕಾರಿ (DSP)ಯಾಗಿ ಪ್ರಮೋದ್ ಕುಮಾರ್ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಈವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್ ನಾಗೇಗೌಡ ಅವರು ತಮ್ಮ ಹುದ್ದೆಯನ್ನು ಪ್ರಮೋದ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಕಾರ್ಕಳ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಂತರಿಕ ಅಸಮಾಧಾನ: ನಾಯಕತ್ವ Vs ಕಾರ್ಯಕರ್ತರ ನಡುವೆ ಸಮರ?
ಕಾರ್ಕಳ: ಕಾರ್ಕಳದಲ್ಲಿ ಈಗ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ತಾರಕಕ್ಕೇರಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷವನ್ನು ಸಂಘಟಿಸಬೇಕಾದ ನಾಯಕರು ಮತ್ತು ಕಾರ್ಯಕರ್ತರ ನಡುವಿನ ಕಂದಕ ಹೆಚ್ಚಾಗುತ್ತಿದ್ದು, ಇದು ಈಗ "ಕಾಂಗ್ರೆಸ್ ವರ್ಸಸ್ ಮುನಿಯಾಲು ಉದಯ್ ಕುಮಾರ್ ಶೆಟ್ಟಿ" ಎನ್ನುವ ಹಂತಕ್ಕೆ ಬಂದು ತಲುಪಿದೆ.
ಧನು ಪೂಜೆಗೆ ಹೋದ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ: ಕೆರೆಯ ನೀರು ಖಾಲಿ ಮಾಡಿ ತನಿಖೆ – ಟಾರ್ಚ್ ಲೈಟ್ ಪತ್ತೆ: ಪೊಲೀಸರಿಂದ ತೀವ್ರಗೊಂಡ ಶೋಧ ಕಾರ್ಯ
ಬೆಳ್ತಂಗಡಿ : ನಾಳ ದೇವಸ್ಥಾನಕ್ಕೆ ಧನುಪೂಜೆಗೆ ಮನೆಯಿಂದ ಜ.14 ರಂದು 5 ಗಂಟೆಗೆ ಹೊರಟು ಹೋದ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಪುತ್ರ ಬಾಲಕ ಸುಮಂತ್(15) ಎಂಬಾತ ದೇವಸ್ಥಾನಕ್ಕೂ ತಲುಪದೆ ಮನೆಗೂ ವಾಪಾಸು ಹೋಗದೆ ನಾಪತ್ತೆಯಾಗಿ ಆತನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆರೆಯ ನೀರನ್ನು ಖಾಲಿ ಮಾಡಿ ತನಿಖೆ ನಡೆಸಿದ ವೇಳೆ ಬಾಲಕ ಸುಮಂತ್ ಹಿಡಿದುಕೊಂಡು ಹೋದ ನೀಲಿ ಬಣ್ಣದ ಟಾರ್ಚ್ ಲೈಟ್ ಪತ್ತೆಯಾಗಿದೆ.
ಮೂಡುಬಿದಿರೆ ಅಥ್ಲೆಟಿಕ್ಸ್: ಮೂರನೇ ದಿನವೂ ಮಂಗಳೂರು ವಿವಿ ಪಾರುಪತ್ಯ; ಆಳ್ವಾಸ್ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿಕೆ
ಮೂಡುಬಿದಿರೆ: ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಆತಿಥೇಯ ಮಂಗಳೂರು ವಿಶ್ವವಿದ್ಯಾಲಯವು ತನ್ನ ಅಮೋಘ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಹಾಗೂ ಅಮರಮೂಡ್ನೂರಿನಲ್ಲಿ ನೂತನ MRF ಸ್ಥಾಪನೆಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಮನವಿ
ಮಂಗಳೂರು:ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಕೇಳಲಾದ ಚುಕ್ಕೆ ಗುರುತಿನ ಪ್ರಶ್ನೆಗೆ ದೊರೆತ ಉತ್ತರದ ಪ್ರಕಾರ, ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜಲ ಜೀವನ್ ಮಿಷನ್ (ಹರ್ ಘರ್ ಜಲ್) ಯೋಜನೆಯಡಿ, ದಕ್ಷಿಣ ಕನ್ನಡ ಜಿಲ್ಲೆಯ 230 ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, 42 ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಇನ್ನೂ ಪ್ರಗತಿಯ ಹಂತದಲ್ಲಿದೆ.
ಬೆಂಗಳೂರು-ಮಂಗಳೂರು ಡ್ರಗ್ಸ್ ಲಿಂಕ್‌ಗೆ ಬ್ರೇಕ್: ಉಗಾಂಡ ಮಹಿಳೆ ಬಂಧನ, ₹4 ಕೋಟಿ ಮೌಲ್ಯದ ಎಂಡಿಎಂಎ ವಶ
ಮಂಗಳೂರು (ಜನವರಿ 12, 2026): ನಗರದ ಮಾದಕ ವಸ್ತು ಪೆಡ್ಲರ್‌ಗಳಿಗೆ ಬೆಂಗಳೂರಿನಿಂದ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಅಂತರಾಷ್ಟ್ರೀಯ ಜಾಲವೊಂದನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ.
ಮೂಡಬಿದರೆ: ಜ. 25ಕ್ಕೆ ಕಲ್ಲಬೆಟ್ಟುವಿನಲ್ಲಿ 'ಹಿಂದೂ ಸಂಗಮ'; ಆಮಂತ್ರಣ ಪತ್ರಿಕೆ ಬಿಡುಗಡೆ
ಮೂಡಬಿದರೆ -ತಾಲೂಕಿನ ಕಲ್ಲಬೆಟ್ಟುವಿನಲ್ಲಿ ಮುಂಬರುವ ಜನವರಿ 25ರಂದು ನಡೆಯಲಿರುವ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದ ಪೂರ್ವಭಾವಿಯಾಗಿ, ಆಮಂತ್ರಣ ಪತ್ರಿಕೆಯನ್ನು ಬಿಜೆಪಿ ಮುಖಂಡ ಬಾಹುಬಲಿ ಪ್ರಸಾದ್ ಅವರು ಬಿಡುಗಡೆಗೊಳಿಸಿದರು.
ಪರಶುರಾಮ ಥೀಂ ಪಾರ್ಕ್ ಕಳ್ಳತನ: ಬಂಧಿತ ಆರೋಪಿಗಳ ಬಗ್ಗೆ ಶಾಸಕ ವಿ. ಸುನಿಲ್ ಕುಮಾರ್ ತೀವ್ರ ವಾಗ್ದಾಳಿ; "ಕದ್ದವರು ಕಾಂಗ್ರೆಸ್‌ನ ಬ್ರದರ್ಸ್" ಎಂದು ಆಕ್ರೋಶ
ಕಾರ್ಕಳ: ಕಾರ್ಕಳದ ಪ್ರತಿಷ್ಠಿತ ಪರಶುರಾಮ ಥೀಂ ಪಾರ್ಕ್‌ನ ಕಟ್ಟಡದಿಂದ ಬೆಲೆಬಾಳುವ ತಾಮ್ರದ ಹೊದಿಕೆಗಳನ್ನು ಕಳವು ಮಾಡಿದ ಆರೋಪದ ಮೇಲೆ ಕಳವಾರು ನಿವಾಸಿ ಆರೀಫ್ ಮತ್ತು ಕಾವೂರು ನಿವಾಸಿ ಅಬ್ದುಲ್ ಹಮೀದ್ ಎಂಬುವವರನ್ನು ಪೊಲೀಸರು ಬಂಧಿಸಿರುವ ಬೆನ್ನಲ್ಲೇ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ತೀವ್ರ ರಾಜಕೀಯ ವಾಗ್ದಾಳಿ ನಡೆಸಿದ್ದಾರೆ.
ತಣ್ಣೀರುಪಂಥ ಗ್ರಾಮದ ಬೋಳ್ನಡ್ಕ ರಸ್ತೆ ಅಭಿವೃದ್ಧಿಗೆ ಸಂಸದರ ನಿಧಿಯಿಂದ 10 ಲಕ್ಷ ರೂ. ಅನುದಾನ; ನಾಗರಿಕರಿಂದ ಅಭಿನಂದನೆ
ಬೆಳ್ತಂಗಡಿ: ತಾಲೂಕಿನ ತಣ್ಣೀರುಪಂಥ ಗ್ರಾಮದ ಬೋಳ್ನಡ್ಕ ಭಾಗದ ಜನರ ಬಹು ದಿನಗಳ ಕನಸಾಗಿದ್ದ ಸುಸಜ್ಜಿತ ರಸ್ತೆ ಸಂಪರ್ಕಕ್ಕೆ ಈಗ ಕಾಲ ಕೂಡಿ ಬಂದಿದೆ. ಈ ಭಾಗದ ರಸ್ತೆ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.
ಮಂಗಳೂರು ತಪಸ್ಯ ಬೀಚ್ ಫೆಸ್ಟಿವಲ್‌ನಲ್ಲಿ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್ ಶಿಪ್‌ಗೆ ಅದ್ಧೂರಿ ಚಾಲನೆ
ಮಂಗಳೂರು: ನಗರದ ಕಡಲತೀರದಲ್ಲಿ ಆಯೋಜಿಸಲಾಗಿರುವ 'ತಪಸ್ಯ ಬೀಚ್ ಫೆಸ್ಟಿವಲ್'ನ ಅಂಗವಾಗಿ ಶನಿವಾರದಂದು ಕರ್ನಾಟಕ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್ ಶಿಪ್-2026 ಕ್ಕೆ ಅತ್ಯಂತ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಭದ್ರತಾ ಪಡೆಯ 'ಬ್ಲಾಕ್ ಕ್ಯಾಟ್ ಕಮಾಂಡೋ'ಗೆ ಕಾರ್ಕಳದ ಸಚಿನ್ ಶೆಟ್ಟಿ: ಹೆಬ್ರಿಯ ಯೋಧನಿಗೆ ಅಭಿನಂದನೆಗಳ ಮಹಾಪೂರ
ಕಾರ್ಕಳ/ಹೆಬ್ರಿ: ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಸವಾಲಿನ ಸೇನಾ ತರಬೇತಿಗಳಲ್ಲಿ ಒಂದಾದ ರಾಷ್ಟ್ರೀಯ ಭದ್ರತಾ ಪಡೆಯ 'ಬ್ಲಾಕ್ ಕ್ಯಾಟ್ ಕಮಾಂಡೋ' ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಕಾರ್ಕಳ ತಾಲೂಕಿನ ಹೆಬ್ರಿ ಗ್ರಾಮದ ಯೋಧ ಶ್ರೀ ಸಚಿನ್ ಶೆಟ್ಟಿ ಅವರು ರಾಜ್ಯ ಮತ್ತು ದೇಶಕ್ಕೆ ಹೆಮ್ಮೆಯನ್ನು ತಂದಿದ್ದಾರೆ.
ಕಾಪು: ಪುನರುತ್ಥಾನಗೊಂಡ ಕುರುಡಾಯಿ ಕೆರೆಗೆ ಯುನಿಸೆಫ್ ಅಧಿಕಾರಿ ಭೇಟಿ; 'ನಮ್ಮೂರು ನಮ್ಮ ಕೆರೆ' ಯೋಜನೆಗೆ ಶ್ಲಾಘನೆ
ಕಾಪು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ನಮ್ಮೂರು ನಮ್ಮ ಕೆರೆ' ಕಾರ್ಯಕ್ರಮದಡಿ ಪುನಶ್ಚೇತನಗೊಂಡ ಪಡುಬೆಳ್ಳೆ ಪಾಂಬೂರು ಸಮೀಪದ ಕುರುಡಾಯಿ ಕೆರೆಗೆ ಯುನಿಸೆಫ್ (UNICEF) ಸಂಸ್ಥೆಯ ಹಿರಿಯ ಅಧಿಕಾರಿ ನರಸಿಂಹ ರೆಡ್ಡಿ ಅವರು ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರ್ಕಳಕ್ಕೆ ಬಂತು 1 ಕೋಟಿಯ ಗಿಫ್ಟ್: ಎಂಟು ಕಾಲು ಸಂಕಗಳ ನಿರ್ಮಾಣಕ್ಕೆ ಶಾಸಕ ಸುನಿಲ್ ಕುಮಾರ್ ಚಾಲನೆ
ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ಕಾಲು ಸಂಕಗಳ ನಿರ್ಮಾಣಕ್ಕೆ ಸರ್ಕಾರದಿಂದ ಅಧಿಕೃತ ಅನುಮೋದನೆ ದೊರೆತಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಪುತ್ತೂರು: ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ತೋಟವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 3 ಎಕರೆ ಪ್ರದೇಶದಲ್ಲಿದ್ದ ಕೃಷಿ ನಾಶವಾದ ಘಟನೆ ತಾಲ್ಲೂಕಿನ ಕುರಿಯ ಗ್ರಾಮದ ಬೂಡಿಯಾರ್ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್; ಸುಳ್ಯದಲ್ಲಿ ಆಕ್ರೋಶದ ಅಲೆ
ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಕುರಿತು ಫೇಸ್‌ಬುಕ್‌ನಲ್ಲಿ ಅತ್ಯಂತ ಹಗುರವಾಗಿ ಮತ್ತು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಸ್‌ಗೆ ಟಿಪ್ಪರ್ ಲಾರಿ ಭೀಕರ ಡಿಕ್ಕಿ: ಕಾಲೇಜು ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಂಭೀರ ಗಾಯ
ಕುಂದಾಪುರ ಸಮೀಪದ ಶೆಟ್ರಕಟ್ಟೆ ತಿರುವಿನಲ್ಲಿ ಇಂದು ಸಂಜೆ ಸರ್ಕಾರಿ ಬಸ್ ಮತ್ತು ಮಣ್ಣು ತುಂಬಿದ ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಬೆಳ್ತಂಗಡಿ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ; ಪ್ರಧಾನಿ ಮೋದಿ ಆಡಳಿತ ಮೆಚ್ಚಿ ನಿವೃತ್ತ ಅಧಿಕಾರಿಗಳು ಪಕ್ಷಕ್ಕೆ ಸೇರ್ಪಡೆ
ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯು ಜನವರಿ 5 ರಂದು ಜೈನ್ ಪೇಟೆಯ ಕಿನ್ನಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಸಂಭ್ರಮದಿಂದ ಜರುಗಿತು.
ಕಾರ್ಕಳ ಅಭಿವೃದ್ಧಿ ವಿರೋಧಿಸುವ ಮುನಿಯಾಲು ಹೇಳಿಕೆ ಹಾಸ್ಯಾಸ್ಪದ: ಶಾಸಕ ವಿ. ಸುನಿಲ್ ಕುಮಾರ್ ಖಂಡನೆ
ಕಾರ್ಕಳ: ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿ. ಸುನಿಲ್ ಕುಮಾರ್ ಅವರು, ಕಾರ್ಕಳದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಅವರು ಪರಶುರಾಮ ಪ್ರತಿಮೆಯ ಭಾಗಗಳ ಕಳ್ಳತನದ ಬಗ್ಗೆ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮಂಗಳೂರು: ಬಿಹಾರದಿಂದ ರೈಲಿನ ಮೂಲಕ ಭಾರೀ ಪ್ರಮಾಣದ ಗಾಂಜಾವನ್ನು ಮಂಗಳೂರಿಗೆ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಂಕನಾಡಿ ಗರೋಡಿ ಜಾತ್ರೆಯ ಕೋಳಿ ಅಂಕಕ್ಕೆ ಪೊಲೀಸ್ ತಡೆ: ತುಳುನಾಡ ಸಾಂಪ್ರದಾಯಿಕ ಆಚರಣೆಗೆ ಸಾಲು ಸಾಲು ಸಂಕಷ್ಟ
ಮಂಗಳೂರು: ತುಳುನಾಡಿನ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಂಗಳೂರಿನ ಕಂಕನಾಡಿ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದಲ್ಲಿ ಪ್ರತಿ ವರ್ಷ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಈ ಬಾರಿ ಪೊಲೀಸರು ತಡೆ ಒಡ್ಡಿದ್ದಾರೆ.
ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನಲ್ಲಿ ಕಳ್ಳತನ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸುನಿಲ್ ಕುಮಾರ್ ಆಕ್ರೋಶ
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿರುವ ಮಹತ್ವಾಕಾಂಕ್ಷೆಯ ಪರಶುರಾಮ ಥೀಂ ಪಾರ್ಕ್ ನಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು, ಥೀಂ ಪಾರ್ಕ್‌ನ ಭದ್ರತೆ ಮತ್ತು ನಿರ್ವಹಣೆ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡಿವೆ. ದುಷ್ಕರ್ಮಿಗಳು ಥೀಂ ಪಾರ್ಕ್‌ನ ಬಾಗಿಲನ್ನು ಒಡೆದು ಒಳನುಗ್ಗಿ, ಮೇಲ್ಛಾವಣಿಗೆ ಹಾಕಲಾಗಿದ್ದ ಅಮೂಲ್ಯವಾದ ತಾಮ್ರದ ಹೊದಿಕೆಗಳನ್ನು ಕಳವು ಮಾಡಿದ್ದಾರೆ.
ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ: ಸಚಿವರನ್ನು ಭೇಟಿ ಮಾಡಿದ ಸಮಿತಿ
ಬೆಳ್ತಂಗಡಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಮಾರ್ಚ್ 1 ರಿಂದ 9 ರವರೆಗೆ ಅದ್ಧೂರಿಯಾಗಿ ಜರುಗಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಯಶಸ್ಸಿಗಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಇತ್ತೀಚೆಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವಕ್ಕೆ ಚಾಲನೆ: ಭಕ್ತಿಭಾವದ ಉಗ್ರಾಣ ಮುಹೂರ್ತ ಸಂಪನ್ನ
ಸುಳ್ಯ: ಸುಳ್ಯದ ಆರಾಧ್ಯ ದೈವ ಶ್ರೀ ಚೆನ್ನಕೇಶವ ದೇವರ ವಾರ್ಷಿಕ ಜಾತ್ರೋತ್ಸವವು ಸಡಗರ-ಸಂಭ್ರಮದಿಂದ ಆರಂಭಗೊಂಡಿದೆ. ಜಾತ್ರೋತ್ಸವದ ಅಂಗವಾಗಿ ಅತ್ಯಂತ ಶ್ರದ್ಧಾಭಕ್ತಿಯಿಂದ ಉಗ್ರಾಣ ಮುಹೂರ್ತ ಕಾರ್ಯಕ್ರಮವು ಇಂದು ಸಾಂಗವಾಗಿ ನೆರವೇರಿತು.
ಗುಣಪಾಲ ಕಡಂಬರ ತೇಜೋವಧೆ: ಕಂಬಳ ವಿರೋಧಿ ಲೋಕೇಶ್ ಶೆಟ್ಟಿ ವಜಾಕ್ಕೆ ಆಗ್ರಹ
ಮೂಡುಬಿದಿರೆ:ಕಂಬಳ ಕ್ಷೇತ್ರದ 'ಭೀಷ್ಮ' ಎಂದೇ ಖ್ಯಾತರಾದ ಗುಣಪಾಲ ಕಡಂಬ ಅವರಿಗೆ ನಿರಂತರವಾಗಿ ಅವಹೇಳನ ಮಾಡುತ್ತಿರುವ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಚ್ಚೂರು ಲೋಕೇಶ್ ಶೆಟ್ಟಿ ಅವರನ್ನು ಕೂಡಲೇ ಸಮಿತಿಯಿಂದ ವಜಾಗೊಳಿಸಬೇಕು ಎಂದು ಕಂಬಳಾಭಿಮಾನಿಗಳು ಮತ್ತು ಕೋಣಗಳ ಯಜಮಾನರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ..
ಬ್ರಿಜೇಶ್ ಚೌಟ ಶೈನಿಂಗ್ - ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ಕಂಬಳ ಮಿಂಚಿಂಗ್
ಮಂಗಳೂರು: ಕರಾವಳಿ ಮಣ್ಣಿನ ಹೆಮ್ಮೆಯ ಪ್ರತೀಕವಾದ ಕಂಬಳದಲ್ಲಿ ಈ ಬಾರಿ ರಾಷ್ಟ್ರಭಕ್ತಿಯ ನಿನಾದ ಪ್ರತಿಧ್ವನಿಸಿತು. ರಾಷ್ಟ್ರದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಆಶಯದಂತೆ, ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿ ಆವರಣದಲ್ಲಿ ನಡೆದ ಕಂಬಳ ಈ ಬಾರಿ ಹಲವು ವಿಶೇಷಗಳಿಗೆ ಸಾಕ್ಷಿಯಾಯಿತು.
ಕರ್ನಾಟಕದ ಶೈಕ್ಷಣಿಕ ಭೀಷ್ಮ' ಡಾ. ಎನ್. ವಿನಯ ಹೆಗ್ಡೆ ಇನ್ನಿಲ್ಲ - ಕರಾವಳಿಯ ಶೈಕ್ಷಣಿಕ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ
ಮಂಗಳೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ಕರಾವಳಿ ಕರ್ನಾಟಕದ ಶೈಕ್ಷಣಿಕ ಹಾಗೂ ಕೈಗಾರಿಕಾ ಕ್ಷೇತ್ರದ ದೈತ್ಯ ಶಕ್ತಿ, ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರೂ ಮತ್ತು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿದ್ದ ಶ್ರೀ ಡಾ. ಎನ್. ವಿನಯ ಹೆಗ್ಡೆ (87) ಅವರು ನಿಧನರಾಗಿದ್ದಾರೆ.
ಕರಾವಳಿಗರಿಗೆ ಸಿಹಿಸುದ್ದಿ: ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಮಾರ್ಗದ ವಿದ್ಯುದ್ದೀಕರಣ ಪೂರ್ಣ
ಮಂಗಳೂರು: ಭಾರತೀಯ ರೈಲ್ವೆಯ ತಾಂತ್ರಿಕ ಇತಿಹಾಸದಲ್ಲೇ ಅತ್ಯಂತ ಸವಾಲಿನ ವಿಭಾಗ ಎಂದು ಗುರುತಿಸಲಾಗಿದ್ದ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ ಘಾಟ್ ಪ್ರದೇಶದ ವಿದ್ಯುದ್ದೀಕರಣ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.
ಕಾರ್ಕಳ: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ವರ್ಷಾಚರಣೆಯ ಪ್ರಯುಕ್ತ ಕಾರ್ಕಳದಲ್ಲಿ ಆಯೋಜಿಸಲಾಗಿದ್ದ “ಅಟಲ್ ಸ್ಮರಣೆ” ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಸಂಭ್ರಮ ಸಡಗರದಿಂದ ಜರುಗಿತು. ಬಿಜೆಪಿ ಕಾರ್ಯಕರ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರ ಅಪಾರ ಜನಸ್ತೋಮದ ನಡುವೆ ಅಟಲ್ ಜೀ ಅವರ ಜೀವನ ಮತ್ತು ಸಾಧನೆಗಳನ್ನು ಸ್ಮರಿಸಲಾಯಿತು.
ಕಾರ್ಕಳದಲ್ಲಿ ಸಂಭ್ರಮದ ‘ಅಟಲ್ ಸ್ಮರಣೆ’: ವಾಜಪೇಯಿ ಆಡಳಿತದ ಸುವರ್ಣಯುಗ ಸ್ಮರಿಸಿದ ಬಿ.ಎಲ್. ಸಂತೋಷ್
ಕಾರ್ಕಳ: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ವರ್ಷಾಚರಣೆಯ ಪ್ರಯುಕ್ತ ಕಾರ್ಕಳದಲ್ಲಿ ಆಯೋಜಿಸಲಾಗಿದ್ದ “ಅಟಲ್ ಸ್ಮರಣೆ” ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಸಂಭ್ರಮ ಸಡಗರದಿಂದ ಜರುಗಿತು. ಬಿಜೆಪಿ ಕಾರ್ಯಕರ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರ ಅಪಾರ ಜನಸ್ತೋಮದ ನಡುವೆ ಅಟಲ್ ಜೀ ಅವರ ಜೀವನ ಮತ್ತು ಸಾಧನೆಗಳನ್ನು ಸ್ಮರಿಸಲಾಯಿತು.
ದ್ವೇಷ ಭಾಷಣ ವಿಧೇಯಕ - ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಡ ಕಾರಿದ ಭರತ್ ಶೆಟ್ಟಿ
ಮಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವನ್ನು ವಿರೋಧಿಸಿ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಸುರತ್ಕಲ್ ಜಂಕ್ಷನ್ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
ಕರಾವಳಿಯಲ್ಲಿ ಅರಳಿದ ಕಮಲ: ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗಳಿಗೆ ನಡೆದ ಚೊಚ್ಚಲ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕೇಸರಿ ಪಡೆ ಭರ್ಜರಿ ಗೆಲುವು ಸಾಧಿಸಿದೆ. ಎರಡು ಮಹತ್ವದ ಪಟ್ಟಣ ಪಂಚಾಯಿತಿಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.
ಸರ್ಕಾರದ ವಿರುದ್ಧ ಬಿಜೆಪಿ ಕಿಡಿ: ಸಚಿವರ ಮಾತು ಕೇವಲ ನಾಟಕ, ಹಿಂದೂಗಳ ಭಾವನೆಗೆ ಕಾಂಗ್ರೆಸ್ ಧಕ್ಕೆ
ಮಂಗಳೂರು: ಬಂಟ್ವಾಳದ ಕೇಪು ಉಳ್ಳಾಲ್ತಿ ಕ್ಷೇತ್ರದ ಶತಮಾನಗಳ ಇತಿಹಾಸವಿರುವ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿರುವುದನ್ನು ಬಿಜೆಪಿ ಶಾಸಕರು ಮತ್ತು ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಕರಾವಳಿ ಶಾಸಕರ ಸಿಂಹಗರ್ಜನೆಗೆ ಬಾಲ ಮುದುರಿಕೊಂಡ ಸಚಿವ ಬೈರತಿ ಸುರೇಶ್
ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನವು ಕರಾವಳಿ ಭಾಗದ ಶಾಸಕರ ಅಭೂತಪೂರ್ವ ಒಗ್ಗಟ್ಟು ಮತ್ತು ಹೋರಾಟಕ್ಕೆ ಸಾಕ್ಷಿಯಾಯಿತು. ಕರಾವಳಿ ಜಿಲ್ಲೆಗಳ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ನಡೆಯ ವಿರುದ್ಧ ಮಾಜಿ ಸಚಿವ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಕರಾವಳಿಯ ಶಾಸಕರು ಸದನದ ಬಾವಿಗಿಳಿದು ನಡೆಸಿದ ಹೋರಾಟವು ಆಡಳಿತ ಪಕ್ಷವನ್ನು ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿಸಿತು.
ಕಾರ್ಕಳ: ಬೆಳಗಾವಿ ಚಳಿಗಾಲದ ಅಧಿವೇಶನ ಇಂದಿಗೆ ಕೊನೆಯಾಗುತ್ತಿದೆ. ಈ ಬಾರಿಯ ಅಧಿವೇಶನ ಒಂದು ಸಂಗತಿಯನ್ನು ಸ್ಪಷ್ಟವಾಗಿ ಹೇಳಿದೆ—ವಿಪಕ್ಷದ ಶಕ್ತಿ ಸ್ಥಾನಮಾನದಲ್ಲಿಲ್ಲ, ಧ್ವನಿಯಲ್ಲಿದೆ. ಈ ಸತ್ಯವನ್ನು ಈ ಬಾರಿ ಸದನದಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ವಿಪಕ್ಷ ಬಿಜೆಪಿಯ ಸಾಮೂಹಿಕ ನಾಯಕತ್ವ ಯಶಸ್ವಿಯಾಗಿದೆ.
ಸದನದಲ್ಲಿ ಸುನಿಲರ ಪ್ರಶ್ನೆಗಳ “ಸುರಿಮಳೆ”ಗೆ ತರಗೆಲೆಯಂತಾದ ಕಾಂಗ್ರೆಸ್
ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವು ಗುರುವಾರ ಸಾಕ್ಷಿಯಾದದ್ದು ಆಡಳಿತ ಪಕ್ಷಕ್ಕೆ ಮುಜುಗರ ತಂದ ಪ್ರಬಲ ವಾಗ್ದಾಳಿಗೆ. ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಅವರು ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಗೃಹ ಇಲಾಖೆಯ ಹದಗೆಟ್ಟ ಸ್ಥಿತಿಯನ್ನು ಬಿಚ್ಚಿಟ್ಟ ರೀತಿ ಸದನದಲ್ಲಿ ಸಂಚಲನ ಮೂಡಿಸಿತು.
ಬೆಳಗಾವಿ ಅಧಿವೇಶನದ ‘ಸುವರ್ಣ’ ಕ್ಷಣಗಳಿಗೆ ಸಾಕ್ಷಿಯಾದ ಕೊರಗ ಸಮುದಾಯ - ಗುರುರಾಜ್ ಗಂಟಿಹೊಳೆ ವಿನೂತನ ಪ್ರಯತ್ನ
ಬೈಂದೂರು/ಬೆಳಗಾವಿ: ಕರಾವಳಿ ಕರ್ನಾಟಕದ ಅತ್ಯಂತ ಹಿಂದುಳಿದ ಹಾಗೂ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಲ್ಲಿ ಒಂದಾದ ‘ಕೊರಗ’ ಸಮುದಾಯದ ಅಭಿವೃದ್ಧಿಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಹೊಸ ದಿಕ್ಕು ತೋರಿಸಿದ್ದಾರೆ.
ಉಡುಪಿ ಜಿಲ್ಲೆಗೆ ಸಿಹಿ ಸುದ್ದಿ ಕೊಟ್ಟ ಪೂಜಾರಿ - 71 ಬಿ.ಎಸ್.ಎನ್.ಎಲ್ ಟವರ್‌ಗಳಿಗೆ ಬರಲಿದೆ ಹೊಸ ಬ್ಯಾಟರಿ
ಜಿಲ್ಲೆಯ ಗ್ರಾಮೀಣ ಮತ್ತು ಒಳ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಮತ್ತು ವಿದ್ಯುತ್ ಕಡಿತದಿಂದಾಗಿ ಸಂಪರ್ಕ ಕಷ್ಟಪಡುತ್ತಿದ್ದ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಕೊನೆಗೂ ಸಿಹಿ ಸುದ್ದಿ ದೊರಕಿದೆ.
ಸದನದಲ್ಲಿ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರ ಸಂಕಷ್ಟ ಪ್ರಸ್ತಾಪಿಸಿದ ಕೋಟ - ರಾಜ್ಯದ 39,000 ರೈತರಿಗೆ ಅನ್ಯಾಯದ ಬಗ್ಗೆ ವಿವರಿಸಿದ ಪೂಜಾರಿ
ಕರಾವಳಿ ಮತ್ತು ಮಲೆನಾಡು ಭಾಗದ ಲಕ್ಷಾಂತರ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರು ಬೆಳೆ ವಿಮೆ ಪರಿಹಾರದಿಂದ ವಂಚಿತರಾಗಿ ಸಂಕಷ್ಟ ಎದುರಿಸುತ್ತಿರುವ ಗಂಭೀರ ವಿಷಯ ಲೋಕಸಭೆಯಲ್ಲಿ ಪ್ರಸ್ತಾಪವಾಗಿದೆ.
ವೈದ್ಯಕೀಯ ಲೋಕಕ್ಕೆ ಕೊರಗ ಕಿರೀಟ - ಕೊರಗ ಸಮುದಾಯದ ಮೊದಲ ವೈದ್ಯೆ ಸ್ನೇಹಾ ಕುಂದಾಪುರ ಯಶೋಗಾಥೆ
ಉಡುಪಿ/ಕುಂದಾಪುರ: ಆದಿವಾಸಿ ಬುಡಕಟ್ಟು ಜನಾಂಗವಾದ ಕೊರಗ ಸಮುದಾಯದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಪದವಿ ಪಡೆದ ಮೊದಲ ಮಹಿಳೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಡಾ. ಸ್ನೇಹಾ ಕುಂದಾಪುರ ಅವರು ಪಾತ್ರರಾಗಿದ್ದಾರೆ.